ಮೃಗಾಲಯದ ಬಗ್ಗೆ
ನಾವು ವನ್ಯಜೀವಿಗಳ ಬಗ್ಗೆ ಮುಳುಗಿದ್ದೇವೆ! ನಮ್ಮ ಸಂದರ್ಶಕರಿಗೆ ಅನನ್ಯ ಅನುಭವವನ್ನು ನೀಡಲು ನಾವು ಕಾಳಜಿ ವಹಿಸುತ್ತೇವೆ. ಇದು ಶಿಮೊಗಾದಲ್ಲಿ ನಿಮ್ಮ ಅತ್ಯುತ್ತಮ ದಿನಗಳಲ್ಲಿ ಒಂದು ಎಂದು ಖಚಿತವಾಗಿ!
ನಾವು ವನ್ಯಜೀವಿಗಳ ಬಗ್ಗೆ ಮುಳುಗಿದ್ದೇವೆ! ನಮ್ಮ ಸಂದರ್ಶಕರಿಗೆ ಅನನ್ಯ ಅನುಭವವನ್ನು ನೀಡಲು ನಾವು ಕಾಳಜಿ ವಹಿಸುತ್ತೇವೆ. ಇದು ಶಿಮೊಗಾದಲ್ಲಿ ನಿಮ್ಮ ಅತ್ಯುತ್ತಮ ದಿನಗಳಲ್ಲಿ ಒಂದು ಎಂದು ಖಚಿತವಾಗಿ!
ಶಿವಮೊಗ್ಗ ಮೃಗಾಲಯ ಮತ್ತು ಸಫಾರಿ ಶಿವಮೊಗ್ಗ (ಓ.ಊ-69) ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿ ಸಾಗರ ರಸ್ತೆಯಲ್ಲಿದೆ. ವಿಶ್ವ ಪ್ರಸಿದ್ದ ಜೋಗ ಜಲಪಾತಕ್ಕೆ, ಸಿಗಂಧೂರು ದೇವಾಲಯಕ್ಕೆ ಹೋಗುವವರು ದಾರಿಯಲ್ಲೇ 195 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿರುವ ಮೃಗಾಲಯ ವೀಕ್ಷಿಸಿ ಹುಲಿ ಮತ್ತು ಸಿಂಹಗಳ ಸಫಾರಿ ವೀಕ್ಷಣೆಯ ರೋಮಾಂಚನ ಅನುಭವಿಸಿ.
ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು. ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಲಂಕೇಶ್, ಯು.ಆರ್.ಆನಂತಮೂರ್ತಿ ಮೊದಲಾದ ಕವಿಗಳ, ಕಲಾವಿದರ ಊರು. ಅಡಿಕೆ, ಭತ್ತದ ಬೀಡು, ತುಂಗೆ, ಭದ್ರೆ ಮೊದಲಾದ ನದಿಗಳ ತವರು, ಎಲ್ಲೆಲ್ಲೂ ಹಸಿರು. ಪಶ್ಚಿಮ ಘಟ್ಟಗಳ, ಪ್ರಾಣಿ ಪಕ್ಷಿಗಳ ನಿಸರ್ಗದ ಸವಿಗೆ, ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ಮೃಗಾಲಯ ವೀಕ್ಷಿಸಿ ಅವಿಸ್ಮರಣೀಯ ದಿನ ಕಳೆಯಿರಿ.
ಶಿವಮೊಗ್ಗ ಮೃಗಾಲಯದಲ್ಲಿ ಏನೆಲ್ಲ ನೋಡಬಹುದು?
ಇಲ್ಲಿ 29ಕ್ಕೂ ಮಿಕ್ಕಿದ ವಿವಿಧ ಜಾತಿಯ ಹಾಗೂ ಒಟ್ಟಾರೆ 320 ಪ್ರಾಣಿ, ಪಕ್ಷಿ, ಸರೀಸೃಪಗಳಿವೆ. ಇಲ್ಲಿನ ಕಪ್ಪು ಚಿರತೆ, ವಿಶಾಲ ಆವರಣದಲ್ಲಿರುವ ಆಸ್ಟ್ರಿಚ್‍ಗಳು, ಕರಡಿ, ಮೊಸಳೆ, ಹೆಬ್ಬಾವು ಮುಂತಾದ ಪ್ರಾಣಿ ಪಕ್ಷಿಗಳ ನಡವಳಿಕೆ ಗಮನಿಸಿ, ಆನಂದಿಸಿ. ಸಫಾರಿಯಲ್ಲಿ ಐದು ವಿವಿಧ ಬಗೆಯ 150ಕ್ಕೂ ಮಿಕ್ಕಿದ ಜಿಂಕೆಗಳು, ಹುಲಿಗಳು, ಸಿಂಹಗಳನ್ನು ಹತ್ತಿರದಿಂದ ಕಂಡು ರೋಮಾಂಚಿತರಾಗಬಹುದು.
ಏನೆಲ್ಲ ಕಲಿಯಬಹುದು?
ಮೃಗಾಲಯಗಳ ಮೂಲ ಉದ್ದೇಶ ಕೇವಲ ಮನರಂಜನೆಯಲ್ಲ, ಶಿಕ್ಷಣ, ಸಂಶೋಧನೆ ಮತ್ತು ಪ್ರಾಣಿಗಳ ಸಂರಕ್ಷಣೆ ನಮ್ಮ ಗುರಿ. ವನ್ಯಪ್ರಾಣಿಗಳ ಬಗ್ಗೆ, ಅರಣ್ಯ ಸಂಪತ್ತಿನ ಬಗ್ಗೆ ಅರಿವು ಪಡೆಯಿರಿ. ವನ್ಯಜೀವಿಗಳನ್ನು ರಕ್ಷಿಸಿ ಇಲ್ಲಿನ ಮ್ಯೂಸಿಯಂ ನಿಮ್ಮ ಜ್ಞಾನ ಹೆಚ್ಚಿಸುತ್ತದೆ. ಶಿಕ್ಷಣಾಧಿಕಾರಿಗಳು ಎಲ್ಲ ಮಾಹಿತಿ ನೀಡುತ್ತಾರೆ.
ಸಫಾರಿ ವೇಳೆಯಲ್ಲಿ ನಿಮ್ಮ ಕಿಟಕಿಯ ಸನಿಹದಲ್ಲಿ ಗಂಭೀರ ನಡಿಗೆಯ ಹುಲಿ, ಅದರ ಬೆಂಕಿಯಂತಹ ಕಣ್ಣುಗಳು ನೀರೊಳಗೆ ತೋಯುತ್ತಿರುವ ಹುಲಿಗಳು, ಸಿಂಹಗಳ ಆ ಕೇಶರಾಶಿ ಯಾರಿಗೂ ಕೇರ್ ಮಾಡದ ಅವನ ನಡವಳಿಕೆಗಳಿಗೆ ನೀವು ವಿಸ್ಮಿತರಾಗುತ್ತೀರಿ.
ಚುಕ್ಕೆ ಜಿಂಕೆಯ ಸ್ನಿಗ್ಧ ಸೌಂದರ್ಯ, ನೀಲ್‍ಗಾಯ್‍ಗಳ ಗುಂಪು, ಸಾಂಬಾರ್‍ಗಳ ಎತ್ತರದ ನಿಲುವು, ಹಾಗ್ ಡೀರ್‍ಗಳ ಪಿಳಿಪಿಳಿ ನೋಟ, ಕೃಷ್ಣಮೃಗಗಳ ಜಿಗಿತ, ಕೆರೆಯಲ್ಲಿ ಮಿಂದೇಳುವ ಪ್ರಾಣಿಗಳು ನಿಮ್ಮ ಮನಸ್ಸು ಗೆಲ್ಲುತ್ತವೆ.
ನೀವೀಗ ನಮ್ಮ ಅತಿಥಿಗಳು. ಒಂದು ಸುಂದರ ಅನುಭವ ನಿಮ್ಮದು. ಬನ್ನಿ ವನ್ಯಜೀವಿಗಳನ್ನು ರಕ್ಷಿಸೋಣ.