ವನ್ಯಜೀವಿಗಳೊಂದಿಗೆ ನಮಗೆ ಭಾವನಾತ್ಮಕ ಬೆಸುಗೆಯಿದೆ.

ಶಿವಮೊಗ್ಗದಲ್ಲಿ ನೀವೊಂದು ಅದ್ಭುತ ದಿನ ಕಳೆಯಲಿದ್ದೀರಿ.

ನಮ್ಮೊಂದಿಗೆ!

ವನ್ಯಜೀವಿಗಳ ಬಗೆಗೆ ನೀವು ಕುತೂಹಲಿಗಳೆ?

ನಮ್ಮ ಸಂದರ್ಶಕರಿಗೆ ಒಂದು ಅನನ್ಯ ಅನುಭವವನ್ನು ನೀಡಲು ನಾವು ಕಾಳಜಿ ವಹಿಸುತ್ತೇವೆ.
ಶಿವಮೊಗ್ಗದಲ್ಲಿ ಇದು ನಿಮ್ಮ ಅತ್ಯುತ್ತಮ ದಿನಗಳಲ್ಲಿ ಒಂದು ಎಂದು ನಮಗೆ ಖಚಿತವಾಗಿದೆ

ಮೃಗಾಲಯದ ಬಗ್ಗೆ

ಶಿವಮೊಗ್ಗ ಮೃಗಾಲಯ ಮತ್ತು ಸಫಾರಿ ಶಿವಮೊಗ್ಗ (ಓ.ಊ-69) ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿ ಸಾಗರ ರಸ್ತೆಯಲ್ಲಿದೆ. ವಿಶ್ವ ಪ್ರಸಿದ್ದ ಜೋಗ ಜಲಪಾತಕ್ಕೆ, ಸಿಗಂಧೂರು ದೇವಾಲಯಕ್ಕೆ ಹೋಗುವವರು ದಾರಿಯಲ್ಲೇ 195 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿರುವ ಮೃಗಾಲಯ ವೀಕ್ಷಿಸಿ ಹುಲಿ ಮತ್ತು ಸಿಂಹಗಳ ಸಫಾರಿ ವೀಕ್ಷಣೆಯ ರೋಮಾಂಚನ ಅನುಭವಿಸಿ.

ಮೃಗಾಲಯದೊಳಗೆ ಒಂದು ಸುತ್ತು

jinke

ನಿಸರ್ಗ ಸಹಜ ಮರಗಿಡಗಳು, ಪೊದೆಗಳ ನಡುವೆ ನುಸುಳುವ, ದಿಟ್ಟಿಸುವ, ಘರ್ಜಿಸುವ ಹುಲಿ, ಸಿಂಹಗಳ ಗಂಭೀರ ನಡಿಗೆಗೆ ನೀವು ರೋಮಾಂಚಿತರಾಗುವಿರಿ. ವಿವಿಧ ಜಿಂಕೆಗಳ ಆಟ, ನೋಟಕ್ಕೆ ವಿಸ್ಮಿತರಾಗುವಿರಿ.ವಿವಿದ ಜಾತಿ ಪಕ್ಷಿಗಳ ಬಣ್ಣ, ಚಂದ, ಕಲರವಕ್ಕೆ ಮಾರುಹೋಗುವಿರಿ.ಚಿರತೆಗಳ ಗುಂಪಿನಲ್ಲಿ ಕರಿ ಚಿರತೆ ನೋಡುವಿರಿ. ಕರಡಿಗಳ ಆಟ ಗಲಾಟೆಗೆ ಖುಷಿಪಡುವಿರಿ